ಡಿಸೆಂಬರ್ ೨೩ - ಡಿಸೆಂಬರ್ ತಿಂಗಳಿನ ಇಪ್ಪತ್ತ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೭ ನೇ (ಅಧಿಕ ವರ್ಷದಲ್ಲಿ ೩೫೮ ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೯೨೧ - ವಿಶ್ವಭಾರತಿ ವಿಶ್ವವಿದ್ಯಾಲಯವು ರಬೀಂದ್ರನಾಥ ಠಾಗೋರ್ರಿಂದ ಸ್ಥಾಪಿತವಾಯಿತು. ೧೯೪೭ - ಬೆಲ್ ಲ್ಯಾಬೊರೇಟೊರೀಸ್ನಲ್ಲಿ ಟ್ರ್ಯಾನ್ಸಿಸ್ಟರ್ ಮೊದಲ ಬಾರಿಗೆ ಪ್ರದರ್ಶಿತವಾಯಿತು. ೧೯೫೪ - ವಿಶ್ವದ ಮೊದಲ ಮೂತ್ರಜನಕಾಂಗದ ಬದಲಾವಣೆ ಬಾಸ್ಟನ್ನಲ್ಲಿ ನೆರವೇರಿಸಲಾಯಿತು. ೧೯೭೨ - ನಿಕರಾಗುವದಲ್ಲಿ ಉಂಟಾದ ಭೂಕಂಪದಲ್ಲಿ ಸುಮಾರು ೧೦,೦೦೦ ಜನರು ಬಲಿಯಾದರು. ೧೯೯೦ - ಸ್ಲೊವೇನಿಯದಲ್ಲಿ ನಡೆದ ಜನಾಭಿಪ್ರಾಯ ಮತದಲ್ಲಿ ೮೮% ಜನ ಯುಗೊಸ್ಲಾವಿಯದಿಂದ ಸ್ವಾತಂತ್ರ್ಯಕ್ಕೆ ಒಪ್ಪಿಗೆ ನೀಡಿದರು. == ಜನನ == ೧೭೩೨ - ರಿಚರ್ಡ್ ಆರ್ಕ್‌ರಾಯ್ಟ್, ಇಂಗೆಂಡ್‌ನ ಭೌತವಿಜ್ಞಾನಿ ೧೮೦೫ - ಜೊಸೆಫ್ ಸ್ಮಿತ್ ಜೂನಿಯರ್, ಮಾರ್ಮನ್ ಮತದ ಸ್ಥಾಪಕ. ೧೮೮೯ - ಮೇಹರ್ ಚಂದ್ ಮಹಾಜನ್, ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ೧೯೦೨ - ಚರಣ್ ಸಿಂಗ್, ರೈತ ಮುಖಂಡ ಮತ್ತು ಭಾರತದ ೭ನೇ ಪ್ರಧಾನ ಮಂತ್ರಿ ೧೯೩೩ - ಅಕಿಹಿಟೊ, ಜಪಾನ್ನ ಚಕ್ರವರ್ತಿ. == ಮರಣ == ೧೮೩೪ - ಥಾಮಸ್ ಮಾಲ್ಥಸ್, ಇಂಗ್ಲೆಂಡ್ನ ಅರ್ಥಶಾಸ್ತ್ರ ತಜ್ಞ. ೨೦೦೪ - ಪಿ.ವಿ. ನರಸಿಂಹರಾವ್, ಭಾರತದ ಪ್ರಧಾನಮಂತ್ರಿ. == ದಿನಾಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ